ಸುಗಮ ಸಂಗೀತ

ಭಾರತದ ವಿಶೇಷ ಸಂಗೀತ ಪ್ರಕಾರಗಳಲ್ಲಿ ಸುಗಮ ಸಂಗೀತವೂ ಒಂದು ನಮ್ಮ ಎಲ್ಲಾ ಭಾಷೆಯ ಹೊರತಾಗಿ ಕರ್ನಾಟಕದಲ್ಲಿ ಹುಟ್ಟಿಕೊಂಡಿದ್ದು ಈ ಪ್ರಾಕಾರ ಭಾಷೆಯ ಚೌಕಟ್ಟಿನಲ್ಲಿ ,ಭಾವನೆಗಳನ್ನು ವ್ಯಕ್ತಪಡಿಸುವ ಈ ಶೈಲಿ ಎಲ್ಲರ ಮನೆ ಮಾತಾಗಿದೆ ,ಕವಿಗಳ ಭಾವನೆಗೆ, ಸಾಹಿತ್ಯಕ್ಕೆ ಸಂಗೀತದ ವಿಶೇಷ ಶೈಲಿಯನ್ನು ನೀಡುವುದೇ ಸುಗಮ ಸಂಗೀತದ ಉದ್ದೇಶ ಸುಗಮ ಎಂದರೆ ಹಾಡಲು ಸುಲಭವಾಗುವುದೇ ಸುಗಮ ಸಂಗೀತದ ಶ್ರೇಷ್ಠತೆ ಪಿ, ಕಾಳಿಂಗರಾಯರು ಈ ಸುಗಮ ಸಂಗೀತವನ್ನು ಚಿರಪರಿಚಿತ ಗೊಳಿಸಿದವರಲ್ಲಿ ಮೊದಲಿಗರು


ಕರ್ನಾಟಕದ ಶ್ರೇಷ್ಠ ಸಾಹಿತಿಗಳಾದ ಕುವೆಂಪು,ಮಾಸ್ತಿ, ದ ರಾ ಬೇಂದ್ರೆ, ಅಡಿಗರು,ಹೆಚ್ ಎಸ್ ವೆಂಕಟೇಶ್ ಮೂರ್ತಿ ,ಕೆ ಎಸ್ ನಿಸಾರ್ ಅಹಮದ್, ಬಿ ಆರ್ ಲಕ್ಷಣರಾವ್ ಅವರ ಸಾಹಿತ್ಯ ಪರಂಪರೆಗೆ ಸಂಗೀತದ ಮಾಂತ್ರಿಕತೆಯನ್ನು ಒದಗಿಸಿದವರು ಮೈಸೂರು ಅನಂತಸ್ವಾಮಿ ನಂತರ ಸಿ ಅಶ್ವಥ್ ರವರು ಅನಂತಸ್ವಾಮಿಯವರ ಪರಂಪರೆಯನ್ನು ಮುಂದುವರೆಸಿ ಸುಗಮ ಸಂಗೀತಕ್ಕೆ ಹೊಸ ಆಯಾಮವನ್ನೆ ತಂದುಕೊಟ್ಟರು ವಿಶ್ವಕ್ಕೆ "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ನೀಡಿದವರು ಸಿ ಅಶ್ವಥ್ ಇಂದಿಗೂ ಅನಂತ ಸ್ವಾಮಿಯವರ ಸಂಯೋಜಿತ ಜಿ ಎಸ್ ಶಿವರುದ್ರಪ್ಪ ವಿರಚಿತ "ಎದೆ ತುಂಬಿ ಹಾಡುವೆನು" ಕವಿತೆ ಜನ ಮಾನಸದಲ್ಲಿ ಸದಾ ಹಸಿರಾಗಿದೆ.


ಈ ಸುಗಮ ಸಂಗೀತದ ಲಘು ಸಂಗೀತದಲ್ಲಿ ವಚನಗಳು, ಭಕ್ತಿ ಗೀತೆಗಳು, ದೇವರ ನಾಮ, ಭಾವ ಗೀತೆಗಳು ಪ್ರಮುಖ ಮೈಲಿ ಗಲ್ಲುಗಳಾಗಿವೆ .ರಾಗದ ಆಧಾರದ ಮೇಲೆ ಒಂದು ಗೀತೆಗೆ,ಕವಿತೆಗೆ ಸಂಗೀತ ನೀಡುವುದು ಒಂದು ಸಾಹಸವೇ ಸರಿ.


ಸೃಷ್ಟಿ ಕಲಾ ಮಂದಿರವು ಸುಗಮ ಸಂಗೀತವನ್ನು ಸಂಗೀತಾಸಕ್ತರಿಗೆ ತರಗತಿಗಳ ಆಧಾರದ ಮೇಲೆ ಹೇಳಿ ಕೊಡುತ್ತದೆ.voice culture ಜೊತೆಗೆ ಟ್ರಾಕ್ ನೊಂದಿಗೆ ಸುಗಮ ಸಂಗೀತ ವನ್ನು ಹೇಳಿ ಕೊಡುವುದು ಈ ಸಂಸ್ಥೆಯ ವೈಶಿಷ್ಟ್ಯತೆಗಳ‌ಲ್ಲೊಂದು.ಈ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಹಲವಾರು ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ .