ಕರ್ನಾಟಕ ಶಾಸ್ತ್ರೀಯ ಸಂಗೀತ

ಕರ್ನಾಟಕ ಶಾಸ್ತ್ರೀಯ ಸಂಗೀತವು ವಿಶ್ವ ದಲ್ಲೆ ಅತ್ಯಂತ ಶ್ರೇಷ್ಠ ಸಂಗೀತ ಪ್ರಾಕಾರ ಗಳಲ್ಲಿ ಒಂದು. ಶ್ರೀ ಪುರಂದರ ದಾಸರು ಸ್ವರಗಳಿಗೆ ಶಾಸ್ತ್ರೀಯ ಚೌಕಟ್ಟನ್ನು ನೀಡಿ ಸಂಗೀತ ಕ್ಕೆ ಕೈಪಿಡಿ ಯನ್ನಾಗಿ ನೀಡಿದರು ಸಂಗೀತಾಸಕ್ತರಿಗ ಈ ಕೈಪಿಡಿ ವರವಿದ್ದಂತೆ ಸರಳೆಗಳು. ಜಂಟಿವರಸೆ.ಧಾಟುವರಸೆ , ಹೆಚ್ಚು ಸ್ತಾಯಿ ತಗ್ಗು ಸ್ತಾಯಿ. ಅಲಂಕಾರಗಳು. ಗೀತೆ ಸ್ವರಜತಿ.


ವರ್ಣ. ಕೀರ್ತನೆ ಇವು ಶಾಸ್ತ್ರೀಯ ಸಂಗೀತದ ಮೊದಲ ಕಲಿಕಾ ಮಜಲುಗಳು.ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಿಕೆಯ ವಿಧಾನವನ್ನು ಜೂನಿಯರ್,ಸೀನಿಯರ್, ವಿದ್ವತ್ ಎಂಬ ಮೂರು ವಿಭಾಗಗಳಾಗಿ ಬೇರ್ಪಡಿಸಲಾಗಿದೆ ,ಪುರಂದರದಾಸರ ನಂತರ ತ್ಯಾಗರಾಜರು,ಶ್ರೀ ಮುತ್ತುಸ್ವಾಮಿ ದೀಕ್ಷಿತರು ಉತ್ತುಂಗ ಶಿಖರಕ್ಕೆ ಶಾಸ್ತ್ರೀಯ ಸಂಗೀತವನ್ನು ಕೊಂಡೊಯ್ದರು ಈ ಮೂರು ಮಹಾನೀಯರನ್ನು 'ಸಂಗೀತದ ಪಿತಾಮಹ' ರೆಂದು ನಾವು ಕರೆಯುತ್ತೇವೆ ಈ ಮೂವರ ಸ್ಮರಣೆ ಯಲ್ಲಿ "ಆರಾದನೆ" ಯನ್ನು ನಡೆಸಿ ಸಂಗೀತ ಸೇವೆ ಯನ್ನು ಸರಸ್ವತಿಗೆ ಅರ್ಪಿಸುವುದೆ ಈ ಆರಾಧನೆ ಯ ಉದ್ದೇಶ.


ಇದೇ ಪರಂಪರೆಯನ್ನು ಮುಂದುವರಿಸಿಕೊಂಡು ವಿಶ್ವಮಾನ್ಯರಾದವರು ಡಾ||ಎಂ, ಎಸ್ , ಸುಬ್ಬಲಕ್ಷ್ಮಿ ಅವರ ಶಾರೀರ ಇಂದಿಗೂ ಪ್ರಸ್ತುತ, ಅವರ ಸಂಗೀತದ ಪ್ರಾವೀಣ್ಯತೆ ಶುಧ್ದತೆ ಕಾಪಾಡಿಕೊಂಡು ಬರುವುದು ನಮ್ಮೆಲ್ಲರ (ವಿದ್ಯಾರ್ಥಿಗಳ) ಕರ್ತವ್ಯ.


ಈಗ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಕಲಾದರ್ಶಿನಿ ಟ್ರಸ್ಟ್(ರಿ)ಇದರ ಅಂಗ ಸಂಸ್ಥೆಯಾದ 'ಸೃಷ್ಟಿ ಕಲಾಮಂದಿರವು' ಶಾಸ್ತ್ರೀಯ ಕಲಾಸಕ್ತರಿಗಾಗಿ ತರಗತಿಗಳನ್ನು ಪ್ರಾರಂಭಿಸಿದೆ.ಶಾಸ್ತ್ರೀಯ ಚೌಕಟ್ಟಿನಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಓ ಸಂಸ್ಥೆಯ ಉದ್ದೇಶ. ಶಾಸ್ತ್ರೀಯ ಸಂಗೀತವನ್ನು ಪಠ್ಯ ಕ್ರಮದ ಆಧಾರದ ಮೇಲೆ ತರಗತಿಗಳನ್ನು ನಡೆಸಿ ಪರೀಕ್ಷಾ ಮಂಡಳಿಯವರು ನಡೆಸುವ ಸಂಗೀತ ಪರೀಕ್ಷೆಯಲ್ಲಿ ಉನ್ನತ ಮಟ್ಟದ ಸಾಧನೆ ಗೈಯುವಲ್ಲಿ ಸೃಷ್ಟಿ ಕಲಾಮಂದಿರವು ಸಂಪೂರ್ಣ ನೆರವಿಗೆ ನಿಂತಿದೆ. ಇದರ ಜೊತೆಗೆ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ,ಶಿಬಿರಗಳನ್ನು ನಡೆಸಿ ಮಕ್ಕಳ ಪ್ರತಿಭೆಗೆ ಕನ್ನಡಿ ಹಿಡಿದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ .ವಾರ್ಷಿಕೋತ್ಸವದ ಸಂಧರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡುವುದು ಇದರ ವಿಶೇಷ.